Written by Sri Prasanna Venkata Dasaru
hakkiya hegaleri bamdavage
nodakka manasote nanavage..pa..
satrajitana magalettida unmatta narakanolu ta kadida
matte kedahida avanamgava satigittanu ta alimganava..1..
hadinaru savira nariyara sere mudadimda bidisi manohara
aditiya kumdala kalisida hara vidhisuranriparanu salahida dhira..2..
uttama pragjotishapurava bhagadattage kotta varabhayava
karta krishnayyana nambide shrimurtiya padava homdide..3..
narakachaturdashi parvada dina harushadi prakatadanu deva
sharanagatajana vatsala ramga parama bhagavatara paripala..4..
pogali krishnayyana mahimeya mukti nagarada arasana kirtiya
jagadisha prasanvemkateshanu bhaktaraghahari ravi kotiprakashanu..5..
ಹಕ್ಕಿಯ ಹೆಗಲೇರಿ ಬಂದವಗೆ
ನೋಡಕ್ಕ ಮನಸೋತೆ ನಾನವಗೆ॥ಪ॥
ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದ
ಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ॥೧॥
ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿ ಮನೋಹರ
ಅದಿತಿಯ ಕುಂಡಲ ಕಳಿಸಿದ ಹರ ವಿಧಿಸುರನೃಪರನು ಸಲಹಿದ ಧೀರ॥೨॥
ಉತ್ತಮ ಪ್ರಾಗ್ಜೋತಿಷಪುರವ ಭಗದತ್ತಗೆ ಕೊಟ್ಟ ವರಾಭಯವ
ಕರ್ತ ಕೃಷ್ಣಯ್ಯನ ನಂಬಿದೆ ಶ್ರೀಮೂರ್ತಿಯ ಪಾದವ ಹೊಂದಿದೆ॥೩॥
ನರಕಚತುರ್ದಶಿ ಪರ್ವದ ದಿನ ಹರುಷದಿ ಪ್ರಕಟಾದನು ದೇವ
ಶರಣಾಗತಜನ ವತ್ಸಲಾ ರಂಗ ಪರಮ ಭಾಗವತರ ಪರಿಪಾಲ॥೪॥
ಪೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ ನಗರದ ಅರಸನ ಕೀರ್ತಿಯಾ
ಜಗದೀಶ ಪ್ರಸನ್ವೆಂಕಟೇಶನು ಭಕ್ತರಘಹಾರಿ ರವಿ ಕೋಟಿಪ್ರಕಾಶನು॥೫॥
.
.
Spotify:
open.spotify.com/artist/3jNaYekJkIEbgFOvmLUAzw?si=…
Prime music:
music.amazon.in/artists/B09V2PYJ5G/daasoham?market…
Apple music:
music.apple.com/us/artist/daasoham/1612804392
コメント